Noor Fathima’s Account Of Stitching Tattered Hearts Of The Community 

  • English
  • ಕನ್ನಡ

Noor Fathima has been a fiery Dalit Muslim Mahila Okkoota member for seven years, a grassroots women’s collective. The collective (Okkoota) has played an essential role in her journey from being a victim of domestic violence and societal judgment to becoming an anchor of hope and support for other women in her community. Her mother-in-law, an early member of the collective, encouraged her to join, setting in action an array of changes that have not only empowered her but also nurtured her to help other women facing similar battles.

The often camouflaged truths of domestic violence, especially within marginalized communities are streamlined through multiple puppet heads. The critical role that women’s collectives can play here is offering support, empowerment, a safe space, and a medium for women to fight for their rights. Through Noor Fathima’s account, the narrative stresses how collective effort, solidarity, fearlessness, and education can break cycles of oppression, being a flame in the cold to other women in shared struggles. 

Before Noor Fathima joined the Okkoota, she endured years of physical and mental abuse in isolation. Her husband, after years of domestic violence, left her to marry another woman, abandoning her and their two sons. “When my younger son was three and a half years old, I learned from someone that my husband had married another woman,” she recalls. “He told me he’d take care of both families, but he didn’t care for us.” This betrayal was intensified by the abuse faced by her, particularly after her mother-in-law’s death. Her brother-in-law and father-in-law misbehaved with her, trapping her in a constant state of fear within her own walls.

“I decided I wouldn’t stay there any longer,” she explains, choosing to leave her in-laws’ house silently, fearing the loss of her mother-in-law’s honor if she spoke out about the abuse. Her dread of societal judgment also contributed to her silence. “People would comment, ‘Her husband left her, and now she goes out to work—what does she do?’ But I didn’t care. I kept moving forward.”

The turning point in her life came when she joined the Okkoota. Despite facing opposition at home, where her husband and later her son discouraged her from attending meetings, she persisted. The collective empowered her with moral backing and the courage to stand up for herself and others. “If there’s a problem between a husband and wife, two to four of us go together to counsel. We explain to the woman, ‘You must be strong and stand firm in your decisions.’”

Her involvement in the Okkoota reinforced her to fight for her rights. She learned about legal provisions and how to navigate systems that were previously inaccessible to her. “Since joining the Sanghatan, I’ve gotten the courage to raise my voice,” she says. “I question people, and I don’t tolerate injustice anymore.” Through her relationship with the Okkoota, she has encountered substantial and personal changes. On a practical level, she continues to earn a small but steady income by sewing bags, and contributing to her household alongside her son. “For a hundred bags, I get thirty rupees,” she describes. “I earn about 2000-2200 rupees a month. It’s not much, but it’s how I raised my children.” This financial independence, however modest, is a source of dignity for her, primarily in a society where women are often rattled from working.

Personally, her confidence has soared. She has gained a sense of self-worth and fearlessness that she once lacked. “Before, I had no strength to complain or raise my voice. But after my husband left, I found my courage. The Sanghatan further gave me full strength.” she has relieved her past as a quiet sufferer behind latched doors and now stands boldly, no longer hushed by her pain. Today, she advocates for herself and others, even confronting her husband’s relatives and standing up against further abuse. She says, “मैं ज़िन्दगी में बहुत टूटी हूँ।  अभी और टूटना नहीं चाहती हूँ। संघटन के सात रहकर और निखरना चाहती हूँ। दुसरे औरत के हक़ केलिए लड़ना भी चाहती हूँ।” (I have been broken a lot in life. I don’t want to be broken anymore. I want to shine more by being with the Sanghatan. I also want to fight for the rights of other women.)

A key transformation in her life is her relationship with her elder son, who initially restricted her involvement with the Okkoota but later became her biggest ally. “Now, he tells me, ‘Go! See the outside world. I won’t control you—you should live your life how you want,’” she shares in delight. Her son’s growth echoes her own journey—both have come to understand the significance of independence, respect, and equality.

She also narrated how her son stood up to his father after overhearing him tossing accusations at her. “My son dialed him back and yelled, ‘I used to only hear about your behavior, but now I’ve heard it for myself. Now I understand why Mother hates you so much,’” she reflects, recalling the joy she felt in that moment.

For her, the Okkoota is not just a safety net but also a pressing platform for addressing and preventing violence against women. “Many women think, ‘It’s just my husband who beats me—he’s my man, not an outsider.’ But through the Sanghatan, we teach women that violence is not acceptable. We encourage them to stand up for their rights and make them realize that they are not alone.”

The Okkoota also plays a vital role in helping women escape abusive situations. Noor Fathima’s decision to divorce her husband was influenced by Okkoota’s support. “I want to get a divorce, and I’ll do it with the Sanghatan’s help. What’s the point in staying with someone who doesn’t care?” Her resilience, strengthened by the collective, has enabled her to reclaim her life and focus on what honestly counts—her own happiness and the well-being of her son.

Through sharing her story and asserting her rights, she is carving a path, inspiring other women in her community. Her engagement in Okkoota has not only supported her in reconstructing her life but has also formed ripples of change within her community. As she continues to guide other women, she is helping to build a future where women are entitled to live without apprehension, demand their rights, and create a safer, more just society.

Despite the positive changes in Noor Fathima’s life, there are still challenges. “Many women are still afraid to come out. They don’t even consider it violence—‘It’s just my husband, not an outsider,’ they say.” She shares with conviction that Okkoota needs to continue its work in raising awareness and breaking down norms that keep women entangled in abusive relationships. Okkoota, while powerful, still faces the challenge of reaching more women and creating interminable change in a society where domestic violence is often normalized.

Noor Fathima’s lived reality is a shield of power, grounded in collective action and personal resilience. What she cherishes most is the space where women openly discuss their rights, challenges and feel a sense of solidarity. In Okkoota, women don’t just acknowledge her pain; they embrace it as their own, offering plunging moral support. Reflecting on a night spent in Kannur, she remembers how talking about her life made her feel surrounded by family, sensing that her pain was mutual and understood. “There are so many stories like mine that remain suppressed within our community. These stories need to be shared more openly,” she asserts. “When a Muslim woman is violated, it often goes unspoken, unlike cases in other communities. But all women are the same, regardless of religion or caste. We must fight for our rights, both at home and beyond, to create a better life. Women should live independently and freely, and it is through collective struggle that we achieve change.”

This story was written by Eshwari R based on interview with Noor Fathima conducted by Swathi SB. The story was translated to Kannada by Ashok Kumar Kattoji.

ದಲಿತ ಮುಸ್ಲಿಂ ಮಹಿಳಾ ಒಕ್ಕೂಟದಲ್ಲಿ ಸತತ ಏಳು ವರ್ಷದಿಂದ ಸದಸ್ಯೆಯಾಗಿ ಸಂಘಟನೆಯಕೆಳಮಟ್ಟದ ಅಡಿಯಿಂದ ಕಾರ್ಯ ನಿರ್ವಹಿಸುತ್ತಿರುವ ತೀವ್ರ ಮತ್ತು ದಿಟ್ಟ ಮಹಿಳೆ ನೂರ್ ಫಾತೀಮ. ಅವರ ಜೀವನ ಪಯಣದಲ್ಲಿ, ಒಬ್ಬ ಕೌಟುಂಬಿಕ ಹಿಂಸೆ ಮತ್ತು ಸಾಮಾಜಿಕ ಕಟ್ಟುಪಾಡುಗಳ ಬಲಿಪಶುವಾಗಿದ್ದರಿಂದ ಹಿಡಿದು ಇಂದು ಅದೇ ಸಮುದಾಯದಲ್ಲಿ ತನ್ನಂತೆ ಶೋಷಣೆಗೋಳಗಾದ ಮಹಿಳೆಯರ ಬದುಕಿಗೆ ಆಶಾಕಿರಣವಾಗುವಲ್ಲಿ ಅತಿ ಪ್ರಮುಖ ಪಾತ್ರವನ್ನು ಈ ಒಕ್ಕೂಟ ವಹಿಸಿದೆ. ಅದೇ ಒಕ್ಕೂಟದಲ್ಲಿ ಸದಸ್ಯೆಯಾಗಿದ್ದ ಅವರ ಅತ್ತೆ, ನೂರ್ ಫಾತೀಮ ಅವರನ್ನು ಒಕೂಟಕ್ಕೆ ಸೇರ್ಪಡೆಗೊಳ್ಳಲು ಪ್ರೇರೇಪಿಸಿದರೂ. ಇದು ಅವರನ್ನು ಶಕ್ತಿಗೊಳಿಸುವುದಲ್ಲದೆ ಅವರು ಜೀವನ ಪ್ರತಿ ಹಂತದಲ್ಲೂ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಿರುವ ಇತರೆ ಮಹಿಳೆಯರಿಗೂ ಸಹಾ ಸಹಾಯಮಾಡುವ ಅವಕಾಶ ಮತ್ತು ವೇದಿಕೆಯನ್ನು ಕಲ್ಪಿಸಿತು.

ಸಮಾಜದ ಮುಖ್ಯ ವಾಹಿನಿಗೆ ಬರದೇ ಪ್ರತಿ ಮಹಿಳೆಯ ಮನದಳಲ್ಲಿ ಹುದುಗಿರುವ ಕಹಿ ಸತ್ಯಗಳಲ್ಲಿ ಒಂದು ಈ ಕೌಟುಂಬಿಕ ಹಿಂಸಾಚಾರ. ಇಂತಹ ಸಮಯದಲ್ಲಿ ಮಹಿಳಾ ಒಕ್ಕೂಟ, ಶೋಷಿತ ಮಹಿಳೆಯರಿಗೆ ಸಹಾಯಮಾಡುವಲ್ಲಿ ವಹಿಸಬಹುದಾದ ಪ್ರಮುಖ ಪಾತ್ರವೆಂದರೆ, ಅವರಿಗೆ ಬೆಂಬಲ ನೀಡುವುದು, ಸಬಲೀಕರಣಗೊಳಿಸುವುದು, ಸುರಕ್ಷಿತ ಪರಿಸರ ರೂಪಿಸುವುದು ಮತ್ತು ಅವರ ಹಕ್ಕುಗಳಿಗಾಗಿ ಹೊರಾಡಲು ವೇದಿಕೆ ಆಗುವುದು. ನಾವು ನೂರ್ ಫಾತೀಮ ಜೀವನ ಕತೆಯ ಮೂಲಕ ಸಾಮೂಹಿಕ ಶಕ್ತಿ, ಒಗ್ಗಟ್ಟು, ನಿರ್ಭಯತೆ ಮತ್ತು ಶಿಕ್ಷಣ ಹೇಗೆ ಈ ದಬ್ಬಾಳಿಕೆಯ ಸುಳಿಯನ್ನು ನಾಶ ಮಾಡುತ್ತದೆ ಎಂಬುದನ್ನು ಅರಿತುಕೊಳ್ಳಬಹುದು.

ಅವರು ಒಕ್ಕೂಟ ಸೇರುವ ಮುಂಚೆ, ಬಹಳ ವರ್ಷಗಳ ಕಾಲ ಒಬ್ಬಂಟಿಯಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳಗನ್ನು ಅನುಭವಿಸಿದ್ದಾರೆ, ಹಲವು ವರ್ಷಗಳಿಂದ ಹಿಂಸೆ ನೀಡಿದ ಪತಿ, ಆಕೆ ಮತ್ತು ಇಬ್ಬರು ಮಕ್ಕಳನ್ನು  ಬಿಟ್ಟು ಬೇರೆಯವರನ್ನು ಮದುವೆಯಾದನು. ಫಾತಿಮ ತನ್ನ ಕಷ್ಟದ ದಿನಗಳನ್ನು ನೆನೆದುಕೊಂಡು ಹೇಳುತ್ತಾರೆ  “ನನ್ನ ಸಣ್ಣ ಮಗ ಮೂರೂವರೆ ವರ್ಷ ಇದ್ದಾಗ ನನಗೆ ಬೇರೆಯವರಿಂದ ಗೊತ್ತಾಗಿದ್ದು  ನನ್ನ ಗಂಡ ಬೇರೆಯೊಬ್ಬಳನ್ನು  ಮದುವೆಯಾಗಿದ್ದಾನೆಂದು..ಎರಡೂ ಕುಟುಂಬಗಳನ್ನು ನೋಡಿಕೊಳ್ಳುತ್ತೇನೆ ಎಂದ ನನ್ನ ಗಂಡ, ನಮ್ಮನ್ನು  ತಿರುಗಿ ಸಹಾ ನೋಡಲಿಲ್ಲ”. ಈ ವಿದ್ರೋಹ ಮತ್ತು ಕಿರುಕುಳಗಳು ಅವರ  ಅತ್ತೆಯ ಮರಣದ ನಂತರ ಇನ್ನೂ ತೀವ್ರಗೊಂಡವು. ಆಕೆಯ ಮಾವ ಮತ್ತು ಭಾವ ಅವಳೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು, ಈ ಸನ್ನಿವೇಶಗಳು ಅವರನ್ನು  ತನ್ನದೇ ಮನೆಯಲ್ಲಿ ಭಯಭೀತಳಾಗಿ ಬದುಕುವಂತೆ ಮಾಡಿತು. “ಅಂದೇ ನಾನು ನಿರ್ಧಾರ ಮಾಡಿದೆ ಈ ಮನೆಯಲ್ಲಿ ಇನ್ನು ನಾನು ಇರುವುದಿಲ್ಲವೆಂದು” ಮತ್ತು ಯಾವುದೇ ಸುಳಿವಿಲ್ಲದೆ ತನ್ನ ಮಾವನ ಮನೆ ಬಿಡುವ ತೀರ್ಮಾನಿಸಿದರು. ದೌರ್ಜನ್ಯ ಮತ್ತು ಕಿರುಕುಳದ ಬಗ್ಗೆ ಯಾರಿಗಾದರೂ ಹೇಳಿದರೆ ಎಲ್ಲಿ ತನ್ನ ಅತ್ತೆಯ ನಂಬಿಕೆ, ಘನತೆ ಮತ್ತು ಗೌರವಕ್ಕೆ ದಕ್ಕೆ ತರುವುದೆಂದು ಸದ್ದಿಲ್ಲದೇ ಮನೆ ಬಿಟ್ಟರು. ಜೊತೆಗೆ ಸಮಾಜದ ಕಟ್ಟುಪಾಡುಗಳು,ನೀತಿ ನಿಯಮಗಳು ಅವರ ಅಳಲಿನ ಧ್ವನಿಯೆನ್ನು ಲೀನಗೊಳ್ಳುವಂತೆ ಮಾಡಿದವು. “ಜನರು ಆಡಿಕೊಳ್ಳುತ್ತಾರೆ, ಗಂಡ ಬೇರೆ ಬಿಟ್ಟುಹೋದ, ಈಗ ಕೆಲಸಕ್ಕೆ ಹೊರಗಡೆ ಹೋಗ್ತಾ ಇದಾಳೆ ಏನ್ ಮಾಡತಳೋ ಅಂತಾ? ಆದರೆ ನಾನು ಇದಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ, ಮುಂದೆ ನಡೆಯುತ್ತಾ ಹೋದೆ”.  

ಜೀವನದ ಮುಖ್ಯ ತಿರುವ ಕಂಡದ್ದು ಆಕೆ ಒಕ್ಕೂಟ ಸೇರಿಕೊಂಡಾಗ. ಮನೆಯೆಲ್ಲಿನ ವಿರೋಧ, ಗಂಡ ಮತ್ತು ದೊಡ್ಡ ಮಗ ಆಕೆಯನ್ನು ಸಭೆಗಳಲ್ಲಿ ಭಾಗವಿಹಿಸಲು ಪ್ರೋತ್ಸಾಹ ನೀಡದಿದ್ದರು ಸಹಾ, ಆಕೆ ಇದರಿಂದ ಹಿಂದೆ ಸರಿಯದೆ ಗಟ್ಟಿಯಾಗಿ ನಿಂತರು. ಒಕ್ಕೂಟ  ಅವರಿಗೆ ನೈತಿಕ ಬೆಂಬಲ ಮತ್ತು ತನಗಾಗಿ ಮತ್ತು ಇತರರ ಪರವಾಗಿ ನಿಲ್ಲುವ ಧೈರ್ಯವನ್ನು ನೀಡಿತು. “ಇವಾಗ ಗಂಡ ಹೆಂಡತಿ ಮಧ್ಯೆ ಎನಾದರೂ ಸಮಸ್ಯೆ ಬಂದರೆ ನಾವು ಒಂದೆರಡು ಮಂದಿ ಒಕ್ಕೂಟದ ಕಡೆಯಿಂದ ಹೋಗಿ ಸಂತೈಸಿ ಧೈರ್ಯ ಹೇಳಿ, ಹೆದರದೆ ಗಟ್ಟಿಯಾಗಿ ನಿಲ್ಲಬೇಕು ಮತ್ತು ದೃಢ ನಿರ್ಧಾರಗಳನ್ನು ಮಾಡಬೇಕು ಎಂದು ಮಹಿಳೆಯರಿಗೆ ಹೇಳುತ್ತೇವೆ”.

ಒಕ್ಕೂಟದಲ್ಲಿ ಅವರ ಪಾಲ್ಗೊಳ್ಳುವಿಕೆಯು ತನ್ನ ಹಕ್ಕುಗಳಿಗಾಗಿ ಹೋರಾಡಲು ಆಕೆಯನ್ನು ಬಲಪಡಿಸಿದೆ. ಕಾನೂನು ನಿಬಂಧನೆಗಳ ಬಗ್ಗೆ ಮತ್ತು ಈ ಹಿಂದೆ ಅವರಿಗೆ ಪ್ರವೇಶಿಸಲಾಗದ ವ್ಯವಸ್ಥೆಗಳನ್ನು ಹೇಗೆ ತಲುಪುವುದು ಎಂಬುದರ ಬಗ್ಗೆ ಅವರು ಕಲಿತರು. “ ನಾನು ಸಂಘಟನೆ ಸೇರಿದಾಗಿನಿಂದ ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಧೈರ್ಯ ಬಂತು, ನಾನು ಜನರನ್ನು ಪ್ರಶ್ನೆ ಮಾಡುತ್ತೇನೆ, ಮತ್ತು ಅನ್ಯಾಯವನ್ನು ಸಹಿಸುವುದಿಲ್ಲ”. ಒಕ್ಕೂಟದೊಂದಿನ ಒಡನಾಟ ಅವರ  ಜೀವನದಲ್ಲಿ ಸಾಕಷ್ಟು ವೈಯಕ್ತಿಕ ಮತ್ತು  ಘನನೀಯ ಬದಲಾವಣೆಗಳನ್ನು ತಂದಿದೆ. ಇದರ ಜೊತೆಗೆ ಕೈ ಚೀಲಗಳನ್ನು  ಹೊಲಿಯುವ ಮೂಲಕ ಸ್ವಂತ ದುಡಿಮೆ ಮಾಡುವುದನ್ನು ಸಹ ಮುಂದುವರೆಸುತ್ತಿದ್ದಾರೆ. ಇದು ಮನೆ ನೋಡಿಕೊಳ್ಳುವಲ್ಲಿ ಮಗನ ಜೊತೆಗೆ ಅವರ ಒಂದು ಪಾಲು. “ನೂರು ಚೀಲಗಳಿಗೆ, ನನಗೆ ಮೂವತ್ತು ರೂಪಾಯಿಗಳು ಸಿಗುತ್ತವೆ” ಎಂದು ಅವರು ವಿವರಿಸುತ್ತಾರೆ. “ನಾನು ತಿಂಗಳಿಗೆ ಸುಮಾರು 2000-2200 ರೂಪಾಯಿಗಳನ್ನು ಸಂಪಾದಿಸುತ್ತೇನೆ. ಇದು ಹೆಚ್ಚೇನೂ ಅಲ್ಲ, ಆದರೆ ಇದೇ ರೀತಿ ನಾನು ನನ್ನ ಮಕ್ಕಳನ್ನು ಬೆಳೆಸಿದ್ದು”, ಈ ಒಂದು ಆರ್ಥಿಕ ಸ್ವಾತಂತ್ರ್ಯ ಎಷ್ಟೇ ಸಾಧಾರಣವಾಗಿದ್ದರು ಸಹಾ ಇದೇ ಅವರಿಗೆ ಒಂದು ಆತ್ಮವಿಶ್ವಾಸ ಮತ್ತು ಗಣತೆ ದೊರೆಕಿಸಿಕೊಡುವ ಮೂಲವಾಗಿದೆ, ಅದೂ ಮುಖ್ಯವಾಗಿ ಮಹಿಳೆಯರು ಕೆಲಸ ಮಾಡುವ ಆಯ್ಕೆಯ ಕುರಿತು ಬಡಬಡಿಸುವ ಪ್ರತ್ಯೇಕ ಸಮಾಜದಲ್ಲಿ, ದುಡಿಯುವ ನಿರ್ಧಾರ ಫಾತಿಮಾಗೆ ಆತ್ಮವಿಶ್ವಾಸ ನೀಡಿದೆ.

“ಮೊದಲು, ನನಗೆ ದೂರು ನೀಡಲು ಅಥವಾ ಧ್ವನಿ ಎತ್ತಲು ಧೈರ್ಯ ಇರಲಿಲ್ಲ. ಆದರೆ ನನ್ನ ಗಂಡ ಬಿಟ್ಟು ಹೋದ ನಂತರ, ನಾನು ನನ್ನ ಧೈರ್ಯವನ್ನು ಕಂಡುಕೊಂಡೆ. ನಂತರ ಸಂಘಟನೆ ನನಗೆ ಸಂಪೂರ್ಣ ಶಕ್ತಿಯನ್ನು ನೀಡಿತು.” ಅವರು ಮುಚ್ಚಿದ ಬಾಗಿಲುಗಳ ಹಿಂದೆ ಮೌನವಾಗಿ ಬಳಲುತ್ತಿದ್ದಿ ಈಗ ತನ್ನ ನೋವಿನಿಂದ ಮೌನವಾಗದೆ ಧೈರ್ಯದಿಂದ ನಿಂತಿದ್ದಾರೆ. ಇಂದು, ಅವರು ತನ್ನ ಮತ್ತು ಇತರರ ಪರವಾಗಿ ವಾದಿಸುತ್ತಾರೆ, ತನ್ನ ಗಂಡನ ಸಂಬಂಧಿಕರನ್ನು ಸಹ ಎದುರಿಸುತ್ತಾರೆ ಮತ್ತು ಮತ್ತಷ್ಟು ನಿಂದನೆಯ ವಿರುದ್ಧ ನಿಲ್ಲುತ್ತಾರೆ. ಅವರು ಹೇಳುತ್ತಾರೆ, मैं ज़िन्दगी में बहुत टूटी हूँ। अभी और टूटना नहीं चाहती हूँ। संघटन के सात रहकर और निखरना चाहती हूँ। दुसरे औरत के हक़ केलिए लड़ना भी चाहती हूँ।

(ಜೀವನದಲ್ಲಿ ನಾನು ಸಾಕಷ್ಟು ನೊಂದಿದ್ದೇನೆ, ಇನ್ನೂ ಹೆಚ್ಚು ನೊಂದಲು ಬಯಸುವದಿಲ್ಲ, ಸಂಘಟನೆ ಜೊತೆ ಇರುತ್ತಾ ಹೆಚ್ಚು ಬೆಳೆಯಲು ಬಯಸುತ್ತೇನೆ ಮತ್ತು ಇನ್ನೂ ಮಹಿಳೆಯರ ಹಕ್ಕುಗಳಿಗಾಗಿ  ಹೋರಾಟ ಮಾಡುಲು ಬಯಸುತ್ತೇನೆ.)

ಅವರ ಜೀವನದಲ್ಲಿ ಒಂದು ಪ್ರಮುಖ ಪರಿವರ್ತನೆಯೆಂದರೆ ಅವರ ಹಿರಿಯ ಮಗನೊಂದಿಗಿನ ಸಂಬಂಧ. ಮಗ ಆರಂಭದಲ್ಲಿ ಒಕ್ಕೂಟದೊಂದಿಗೆ ತಮ್ಮ ಪಾಲ್ಗೊಳ್ಳುವಿಕೆಯನ್ನು ನಿರ್ಬಂಧಿಸಿತಿದ್ದ, ಆತನೇ ನಂತರ ಅವರ ಅತಿದೊಡ್ಡ ಮಿತ್ರನಾದ. “ಈಗ, ಅವನೇ ನನಗೆ ಹೇಳುತ್ತಾನೇ, ‘ಹೋಗು! ಹೊರಗಿನ ಜಗತ್ತನ್ನು ನೋಡು ಅಂತ. ನಾನು ನಿನ್ನನ್ನು ತಡೆಯುವುದಿಲ್ಲ ಅಂತ ನೀನು ನಿನ್ನ ಜೀವನವನ್ನು ನಿನಗೆ ಬೇಕಾದಂತೆ ಬದುಕಬೇಕು’ ಎಂದು ಅವನು ಸಂತೋಷದಿಂದ ಹೇಳುತ್ತಾನೆ”. ಅವರ ಮಗನ ಬೆಳವಣಿಗೆಯು ಅವರ ಸ್ವಂತ ಪ್ರಯಾಣವನ್ನು ಪ್ರತಿಧ್ವನಿಸುತ್ತದೆ – ಇಬ್ಬರೂ ಸ್ವಾತಂತ್ರ್ಯ, ಗೌರವ ಮತ್ತು ಸಮಾನತೆಯ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ.

ಅವರು ಹೇಳುತ್ತಾರೆ – ತನ್ನ ಮಗ, ತಂದೆ ಯಾವಗಲೂ ಆರೋಪ ಮಾಡುವುದನ್ನು ನೋಡಿ ಹೇಗೆ ತನ್ನ ಗಂಡನ ವಿರುದ್ಧ ತಿರುಗಿ ಬಿದ್ದನೆಂದು, “ಒಂದು ದಿನ ನನ್ನ ಮಗ ನನ್ನ ಗಂಡನಿಗೆ ಕಾಲ್ ಮಾಡಿ ‘ನಿನ್ನ ನಡವಳಿಕೆಗಳ ಬಗ್ಗೆ ಕೇಳಿದ್ದೆ ಆದರೆ ಈವತ್ತು ಪ್ರತ್ಯಕ್ಷವಾಗಿ ನೋಡಿದೆ, ಈವಾಗ ನನಗೆ ಅರ್ಥ ಆಯ್ತು ಎನಕ್ಕೆಅಮ್ಮ ನಿನ್ನ ದ್ವೇಷ ಮಾಡ್ತಾರೆ ಅಂತ’” ಈ ರೀತಿ ಹೇಳ್ತಾ ಅಂದು ತನಗಾದ ಖುಷಿಯನ್ನು ನೆನೆಪಿಸಿಕೊಳ್ಳುತ್ತಾರೆ.

ಅವರಿಗೆ, ಒಕೂಟವು ಕೇವಲ ಸುರಕ್ಷತಾ ಜಾಲವಲ್ಲ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪರಿಹರಿಸಲು ಮತ್ತು ತಡೆಯಲು ವೇದಿಕೆಯಾಗಿದೆ. “ಸಾಕಷ್ಟು ಮಹಿಳೆಯರು ‘ತನ್ನನ್ನು ಹೊಡೆಯುವುದು ಮತ್ತು ಹಿಂಸೆ ನೀಡುವುದು ತನ್ನ ಗಂಡನೆ ತಾನೇ ಬೇರೆ ಯಾರೋ ಹೊರಗಿನವರಲ್ಲವೆಂದು’ ಭಾವಿಸುತ್ತಾರೆ. ಆದರೆ ಸಂಘಟನೆಯ ಮೂಲಕ ಮಹಿಳೆಯರಿಗೆ ಯಾವುದೇ ರೀತಿಯ ಹಾಗೂ ಯಾರಿಂದಾದರೂ ಆದರೂ ಹಿಂಸೆ ಸಹಿಸಿಕೊಳ್ಳುವ ಸಂಗತಿಯಲ್ಲವೆಂದು ಮನನಮಾಡಿಸುತ್ತೇವೆ. ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಪ್ರೋತ್ಸಾಹಿಸುತ್ತೇವೆ ಮತ್ತು ಅವರು ಈ ಹೋರಾಟದ ಹಾದಿಯಲ್ಲಿ ಒಂಟಿಯಾಗಿಲ್ಲವೆಂದು ಅರಿತುಕೊಳ್ಳುವಂತೆ ಮಾಡುತ್ತೇವೆ.”  

ನಿಂದನೀಯ ಸಂದರ್ಭಗಳಿಂದ ಪಾರಾಗಲು ಮಹಿಳೆಯರಿಗೆ ಸಹಾಯ ಮಾಡುವಲ್ಲಿ ಒಕ್ಕೂಟವು ಪ್ರಮುಖ ಪಾತ್ರ ವಹಿಸುತ್ತದೆ. ನೂರ್ ಫಾತೀಮ ತನ್ನ ಪತಿಗೆ ಮದುವೆ ವಿಚ್ಛೇದನ ನೀಡುವ ನಿರ್ಧಾರವು ಒಕ್ಕೂಟದ ಬೆಂಬಲದಿಂದ ಪ್ರಭಾವಿತವಾಗಿತ್ತು. “ನನಗೆ ವಿಚ್ಛೇದನ ಬೇಕಿದೆ ಮತ್ತು ಅದನ್ನು ನಾನು ಸಂಘಟನೆಯ ಬೆಂಬಲದಿಂದ ಪಡೆದುಕೊಳ್ಳುತ್ತೇನೆ, ನಮ್ಮ ಬಗ್ಗೆ ಕಾಳಜಿವಹಿಸದವರ ಜೊತೆ ಬದುಕುವುದರಲ್ಲಿ ಯಾವ ಅರ್ಥವಿದೆ?” ಅವರ ದಿಟ್ಟತನ ಮತ್ತು ಒಕ್ಕೂಟದ ಬೆಂಬಲ, ಆಕೆಯ ಬದುಕನ್ನು ಮತ್ತೆ ಮರಳಿ ಪಡೆಯುವಂತೆ ಮಾಡಿದವು – ಮುಖ್ಯವಾಗಿ ಆಕೆಯ ಸಂತೋಷ ಮತ್ತು ಮಗನ ಯೋಗಕ್ಷೇಮ ಕಡೆ ಗಮನಹರಿಸಲು ಸಾಧ್ಯವಾಗಿದೆ.

ತನ್ನ ಕಥೆಯನ್ನು ಹಂಚಿಕೊಳ್ಳುವ ಮೂಲಕ ಮತ್ತು ತನ್ನ ಹಕ್ಕುಗಳನ್ನು ಪ್ರತಿಪಾದಿಸುವ ಮೂಲಕ, ತನ್ನ ಸಮುದಾಯದ ಇತರ ಮಹಿಳೆಯರಿಗೆ ಸ್ಫೂರ್ತಿ ನೀಡುವ ಮಾರ್ಗವನ್ನು ರೂಪಿಸುತ್ತಿದ್ದಾರೆ. ಒಕ್ಕೂಟದಲ್ಲಿ ಅವರ ಒಡನಾಟ ಅವರ ಜೀವನವನ್ನು ಮರಳಿ ಕಟ್ಟಿಕುಳ್ಳುವಲ್ಲಿ ಅವರನ್ನು ಬೆಂಬಲಿಸಿವುದಲ್ಲದೇ ಅವರದೇ ಸಮುದಾಯದಲ್ಲಿ ಬದಲಾವಣೆಯ ಅಲೆಗಳನ್ನು ಸೃಷ್ಟಿಸಿದೆ. ಅವರು ಇತರ ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತಲೇ ಬರುತಿದ್ದಾರೆ. ಯಾವುದೇ ರೀತಿಯ ದಬ್ಬಾಳಿಕೆ ಇಲ್ಲದ, ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಅಡ್ಡಿಯಿಲ್ಲದ, ಒಂದು ಸುರಕ್ಷಿತ, ನ್ಯಾಯಾಯುತ ಸಮಾಜವನ್ನು ಕಟ್ಟಿಕೊಡುವಲ್ಲಿ ಸಹಾಯ ಮಾಡುತ್ತಿದ್ದಾರೆ.

ನೂರ್ ಫಾತೀಮ ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳ ಹೊರತಾಗಿಯೂ, ಇನ್ನೂ ಸವಾಲುಗಳಿವೆ. “ಅನೇಕ ಮಹಿಳೆಯರು ಇನ್ನೂ ಹೊರಗೆ ಬರಲು ಹೆದರುತ್ತಾರೆ. ಅವರು ಅದನ್ನು ಹಿಂಸೆ ಎಂದು ಪರಿಗಣಿಸುವುದಿಲ್ಲ – ‘ಇದು ನನ್ನ ಪತಿ ಮಾತ್ರ, ಹೊರಗಿನವರಲ್ಲ’ ಎಂದು ಅವರು ಹೇಳುತ್ತಾರೆ. ಜಾಗೃತಿ ಮೂಡಿಸುವಲ್ಲಿ ಮತ್ತು ಮಹಿಳೆಯರನ್ನು ನಿಂದನಾತ್ಮಕ ಸಂಬಂಧಗಳಲ್ಲಿ ಸಿಲುಕಿಸುವ ನಿಯಮಗಳನ್ನು ಮುರಿಯುವಲ್ಲಿ ಒಕ್ಕೂಟ ತನ್ನ ಕೆಲಸವನ್ನು ಮುಂದುವರಿಸಬೇಕಾಗಿದೆ ಎಂದು ಅವರು ದೃಢನಿಶ್ಚಯದಿಂದ ಹಂಚಿಕೊಳ್ಳುತ್ತಾರೆ. ಒಕ್ಕೂಟ  ಶಕ್ತಿಶಾಲಿಯಾಗಿದ್ದರೂ, ಹೆಚ್ಚಿನ ಮಹಿಳೆಯರನ್ನು ತಲುಪುವ ಮತ್ತು ಕೌಟುಂಬಿಕ ಹಿಂಸಾಚಾರವನ್ನು ಆಗಾಗ್ಗೆ ಸಾಮಾನ್ಯಗೊಳಿಸುವ ಸಮಾಜದಲ್ಲಿ ನಿರಂತರ ಬದಲಾವಣೆಯನ್ನು ಸೃಷ್ಟಿಸುವ ಸವಾಲುಗಳನ್ನು ಎದುರಿಸುತ್ತಿದೆ.

ನೂರ್ ಫಾತೀಮ ಅವರ ಜೀವಂತ ವಾಸ್ತವತೆಯು ಶಕ್ತಿಯ ಗುರಾಣಿಯಾಗಿದ್ದು, ಸಾಮೂಹಿಕ ಕ್ರಿಯೆ ಮತ್ತು ವೈಯಕ್ತಿಕ ಸ್ಥಿತಿಸ್ಥಾಪಕತ್ವದಲ್ಲಿ ನೆಲೆಗೊಂಡಿದೆ. ಮಹಿಳೆಯರು ತಮ್ಮ ಹಕ್ಕುಗಳು, ಸವಾಲುಗಳನ್ನು ಮುಕ್ತವಾಗಿ ಚರ್ಚಿಸುವ ಮತ್ತು ಒಗ್ಗಟ್ಟಿನ ಭಾವವನ್ನು ಅನುಭವಿಸುವ ಜಾಗವನ್ನು ಅವರು ಹೆಚ್ಚು ಪ್ರೀತಿಸುತ್ತಾರೆ. ಒಕ್ಕೂಟದಲ್ಲಿ, ಮಹಿಳೆಯರು ತನ್ನ ನೋವನ್ನು ಅರ್ಥ ಮಾಡಿಕೊಳ್ಳುತ್ತಾರೆ; ಅವರು ಅದನ್ನು ತಮ್ಮದೆಂದು ಸ್ವೀಕರಿಸುತ್ತಾರೆ, ನೈತಿಕ ಬೆಂಬಲವನ್ನು ನೀಡುತ್ತಾರೆ. ಕಣ್ಣೂರಿನಲ್ಲಿ ಕಳೆದ ರಾತ್ರಿಯನ್ನು ಪ್ರತಿಬಿಂಬಿಸುವಾಗ, ತನ್ನ ಜೀವನದ ಬಗ್ಗೆ ಮಾತನಾಡಿದಾಗ ಹೇಗೆ ಕುಟುಂಬದಿಂದ ಬೆಂಬಲ ಸಿಕ್ಕಹಾಗೆ, ಮಹಿಳೆಯರು ಅವರನ್ನು ಅರ್ಥ ಮಾಡಿಕೊಂಡದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. “ನಮ್ಮ ಸಮುದಾಯದೊಳಗೆ ನನ್ನಂತಹ ಅನೇಕ ಕಥೆಗಳು ನಿಗ್ರಹಿಸಲ್ಪಟ್ಟಿವೆ. ಈ ಕಥೆಗಳನ್ನು ಹೆಚ್ಚು ಮುಕ್ತವಾಗಿ ಹಂಚಿಕೊಳ್ಳಬೇಕಾಗಿದೆ ಎಂದು ಅವರು ಪ್ರತಿಪಾದಿಸುತ್ತಾರೆ. “ಮುಸ್ಲಿಂ ಮಹಿಳೆಯನ್ನು ಉಲ್ಲಂಘಿಸಿದಾಗ ಅದು ಮೌನವಾಗಿ ಉಳಿದುಕೊಳ್ಳುತ್ತದೆ. ಆದರೆ ಧರ್ಮ, ಜಾತಿ ಬೇಧವಿಲ್ಲದೆ ಎಲ್ಲ ಮಹಿಳೆಯರು ಒಂದೇ. ಉತ್ತಮ ಜೀವನವನ್ನು ಸೃಷ್ಟಿಸಲು ನಾವು ನಮ್ಮ ಹಕ್ಕುಗಳಿಗಾಗಿ ಮನೆಯಲ್ಲಿ ಮತ್ತು ಹೊರಗೆ ಹೋರಾಡಬೇಕು. ಮಹಿಳೆಯರು ಸ್ವತಂತ್ರವಾಗಿ ಬದುಕಬೇಕು ಮತ್ತು ಸಾಮೂಹಿಕ ಹೋರಾಟದ ಮೂಲಕ ನಾವು ಬದಲಾವಣೆಯನ್ನು ಸಾಧಿಸುತ್ತೇವೆ.”

ಈ ಕಥೆಯನ್ನು ಈಶ್ವರಿ ಆರ್ ಅವರು ನೂರ್ ಫಾತಿಮಾ ಅವರ ಸಂದರ್ಶನವನ್ನು ಆಧರಿಸಿ ಬರೆದಿದ್ದಾರೆ (ಸ್ವಾತಿ ಎಸ್‌ಬಿ ಸಂದರ್ಶನವನ್ನು ನಡೆಸಿದರು). ಈ ಕಥೆಯನ್ನು ಅಶೋಕ್ ಕುಮಾರ್ ಕಟ್ಟೋಜಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.